‘ಆಲೋನ್’ ನಾಳೆಯಿಂದ ತೆರೆಗೆ
Posted date: 26 Thu, Nov 2015 – 10:15:29 AM

ನಿರ್ದೇಶಕ ಜೆ ಕೆ ಎಸ್ ಅವರ ಮೊದಲ ತ್ರಿಭಾಷಾ ಸಿನಿಮಾ ‘ಆಲೋನ್’. ಆರ್ ಜೆ ಕಂಬೈನ್ಸ್ ಅಡಿಯಲ್ಲಿ ಎಲ್ ಅನಂತ್ ಹಾಗೂ ಪಿ ಕೆ ಫುಡ್ಸ್ ಮಾಲೀಕರಾದ ರಾಮಲಿಂಗಯ್ಯ ಅವರ ನಿರ್ಮಾಣದ ಚಿತ್ರ ‘ಅಲೋನ್’ ಥ್ರಿಲ್ಲರ್ ಕಥಾ ವಸ್ತು ಹೊದಿದೆ. ಈ ಚಿತ್ರ ನಾಳೆಯಿಂದ ಶುಕ್ರವಾರ ಬಿಡುಗಡೆಯಾಗುತ್ತಿದೆ.
ನಿಕಿಶಾ ಪಟೇಲ್, ವಸಿಷ್ಠ ಪ್ರಮುಖ ಪಾತ್ರದಲ್ಲಿದ್ದು, ಪ್ರಸಿದ್ದ ನಟಿ ಸಿಮ್ರಾನ್ ಅವರು ಈ ಸಿನಿಮಾದಲ್ಲಿ ಸೂಪರ್ ಕಾಪ್  ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮಂಗಳೂರಿನ ಬೀಚ್ ಬಳಿ ವಿಶೇಷ ಮನೆಯ ಸೆಟ್ ನಿರ್ಮಿಸಿ, ಅಲ್ಲೇ ಬಹುತೇಕ ಭಾಗದ ಚಿತ್ರೀಕರಣ ನಡೆಸಲಾಗಿದೆ.
ಇನಿಯ, ಗಣೇಶ್, ಬುಲೆಟ್ ಪ್ರಕಾಶ್, ತಬಲಾ ನಾಣಿ, ದಿಲೀಪ್, ಅವಿನಾಶ್, ಮಂಗಳೂರು ಸುರೇಶ್, ಶಾಂತಮ್ಮ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಸುಜಿತ್ ಶೆಟ್ಟಿ ಅವರ ಸಂಗೀತ ಹಾಗೂ ಜೈ ಆನಂದ್ ಅವರ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಕೆ ಡಿ ವೆಂಕಟೇಶ್ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed